ಬರ್ಟೋಲ್ಡ್ ಬ್ರೆಕ್ಟ್ ಎಂಬ ಈ ಜರ್ಮನ್ ನಾಟಕಕಾರ ಪ್ರಾಯಶಃ ಶೇಕ್ಸ್ ಪಿಯರ್ ನಂತರ ನಾಟಕದ ಬಗ್ಗೆ ನಾವು ಆಲೋಚನೆ ಮಾಡುವ ಕ್ರಮವನ್ನೇ ಬದಲಿಸಿದವನು. ಅವನ ಏಲಿಯನೇಷನ್ ಥಿಯೆರಿಗೆ ಭಾರತೀಯ ಜನಪದ ರಂಗಭೂಮಿಯೂ ಕೂಡ ಪ್ರಭಾವ ಬೀರಿದೆ ಅಂತ ಹೇಳುವವರಿದ್ದಾರೆ. ಒಂದು ಗುಟ್ಟಿನ ವಿಚಾರ ಎಂದರೆ ಅವನು ನಾಟಕ ಬರೆಯುತ್ತಿದ್ದ ಹಾಗೆಯೇ ತನ್ನ ಚಿಕ್ಕ ವಯಸ್ಸಿನಿಂದ ಪದ್ಯಗಳನ್ನೂ ಬರೆಯುತ್ತಿದ್ದ. ಆದರೆ ಅವುಗಳೆಲ್ಲ ತೆರೆಯ ಹಿಂದೆಯೇ ಉಳಿದಿದ್ದವೇ ಹೊರತು ಅವುಗಳನ್ನು ಆತ ಜನರ ಮುಂದೆ ತರಲಿಲ್ಲ. ಬ್ರೆಕ್ಟ್ ಸತ್ತ ಮೇಲೆ ಆತ ಎಷ್ಟು ದೊಡ್ದ ಕವಿ ಎಂದು ಗೊತ್ತಾಗುತ್ತಿದೆ. ಜರ್ಮನ್ ಕವಿಗಳಲ್ಲಿ ಆತನನ್ನ ರಿಲ್ಕ್ ನಿಗೆ ಸರಿಸಮ ಎಂದು ನೋಡುವವರಿದ್ದಾರೆ. ಆದರೆ ಒಂದು ವಿಶೇಷ ಎಂದರೆ ಆತನ ಬರವಣಿಗೆಗಳಲ್ಲಿ ಅಲಂಕಾರವೇ ಇರಲಿಲ್ಲ. ಅವನಿಗೆ ವಿಚಾರವೇ ಮುಖ್ಯ. ಆತನ ಕವಿತೆಯ ತಿರುಳಿನಲ್ಲಿ ಒಂದು ದೊಡ್ದ ವಿಚಾರವಿರುತ್ತದೆ. ಅದನ್ನು ಆತ ಬಹಳ ಸರಳವಾಗಿ ಹೇಳುತ್ತಿದ್ದಾನೆಂದು ಅನಿಸಿದರೂ ಆ ವಿಚಾರ ಸರಳವಲ್ಲದ ಒಂದು ಗುಟ್ಟಿನಂತೆ ಗುಪ್ತವಾಗಿ ಇರುತ್ತದೆ. read more »
ಬ್ರೆಕ್ಟ್ ಕವಿತೆಗಳು
ಸರ್ವಧರ್ಮ ಸಮನ್ವಯದ ನಾಗರಿಕತೆ ಉಳಿಸುವ ಸರ್ಕಾರ ಬೇಕು
ನನ್ನ ಬಹಳಹಿಂದಿನ ಗೆಳೆಯರೂ ಜನನಾಯಕರೂ ಆದ ಶ್ರೀ ದೇಶಪಾಂಡೆಯವರು ಕಾಂಗ್ರಸ್ ಪಕ್ಷದ ಕರ್ನಾಟಕದ ಅಧ್ಯಕ್ಷರಾಗಿ ಪಕ್ಷದ ವೆಬ್ ಸೈಟನ್ನು ಅವರ ಪಕ್ಷದ ಸದಸ್ಯನಲ್ಲದ ನನ್ನಿಂದ ಅನಾವರಣಗೊಳಿಸುತ್ತ ಇದ್ದಾರೆ. ಈ ಪ್ರೀತಿಗೆ ಹಾಗೂ ವಿಶ್ವಾಸಕ್ಕೆ ನಾನು ಕೃತಜ್ಞ.
read more »
ವ್ಯಾಲಂಟನ್ ದಿನಕ್ಕಾಗಿ ಒಂದು ಪದ್ಯ
ಭಗವತಿ ಇಸ್ತಾರು
ಸಕಲ ಸೃಷ್ಟಿಯ ಮಾತೃದೇವತೆ
ಸಮರದ ದೇವತೆ, ಕಾಮದ ದೇವತೆ.
ಜಗಭಂಡೆ.
ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿ
ಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ?
ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರ
ಐದುಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ ಪುರಾತನ ತಾಯಿ
ಸಲಹುವ ತಾಯಿ, ಕೊಲ್ಲುವ ತಾಯಿ
ಒಬ್ಬಗಂಡನನ್ನು ಕಪ್ಪೆ ಮಾಡಿದ ದೇವಿ;
ಇನ್ನೊಬ್ಬನನ್ನು ಅಮೃತ ಹುಡುಕಲು ಅಟ್ಟಿದ ತಾಯಿ; read more »
ಗಾಂಧಿ ಮತ್ತು ಎಂಟನೇ ಹೆನ್ರಿ
ಡಾ.ಯು.ಆರ್.ಅನಂತಮೂರ್ತಿಯವರು ಇದೀಗ ಹೊಸ ಹುಮ್ಮಸ್ಸಿನಿಂದ ಕವಿತೆಗಳನ್ನು ಬರೆಯಲು ಆರಂಭಿಸಿದ್ದಾರೆ. ಇದು ನಮಗೂ ಖುಷಿಯ ವಿಷಯ. read more »
ಊರು-ದೇಶದ ಮೂರು ಪದ್ಯಗಳು
ಊರು ಎಂಬುದು ನಮ್ಮ ಮಟ್ಟಿಗೆ ಮೂರ್ತವಾದುದು. ಅಲ್ಲಿನ ಜಾತಿ
ಜಗಳ, ಸಣ್ಣ ಸಣ್ಣ ಅಸೂಯೆಗಳು, ಜಮೀನಿನ ಗಡಿ ತಕರಾರುಗಳ ಜತೆಗೆ ಕಾಲ ಮುಂದಕ್ಕೆ ಹೋಗದೆಯೇ
ನಿಂತು ಬಿಟ್ಟಿದೆಯೇನೋ ಎನಿಸುವಷ್ಟು ಜಂಜಾಟಗಳಿಂದಲೇ ತುಂಬಿದ್ದರೂ ಆ ಊರು ಎಲ್ಲರ
ಇಷ್ಟದ್ದು. ಅಲ್ಲಿನ ಬೀದಿಗಳಿಂದ ಆರಂಭಿಸಿ ಜಗಳಗಳ ತನಕ ಎಲ್ಲವೂ ಸವಿ ನೆನಪುಗಳ ಪಟ್ಟಿಗೆ
ಸೇರುವಂಥವು.
ದೇಶ ಹಾಗಲ್ಲ. ಅದು ಅಮೂರ್ತವಾದುದು. ಅದಕ್ಕೆ ಸೇನೆ ಬೇಕು.
ಅದಕ್ಕೆ ದೇಶಾಭಿಮಾನವೂ ಬೇಕು. ಊರಿಗೆ ಬೇಕಾದ ಪ್ರೀತಿಯಷ್ಟೇ ಅದಕ್ಕೆ ಸಾಕಾಗುವುದಿಲ್ಲ. read more »
ಸಂಸಾರಿ
ಎಗ್ಗಿಲ್ಲದ ಪ್ರಣಯಿ
ಯಾಕೆ?
ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ –
ದಿಟ್ಟರು, ಮೊಂಡರು,
ಮೋಟುಮರ ಗಾಳಿಮಿಂಡ ಅಂತಾರಲ್ಲ
ಹಾಗೆ ಜಗಭಂಡರು
ಸೊಂಪಾಗಿ ಸುಮ್ಮನೇ
ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ
ರೂಢಿಸಿಕೊಂಡು
ತನ್ನ ಅಪಾರ ತೂಕವೂ ಹಗುರವೆಂಬಂತೆ ಸದ್ಯದ ಗಾಳಿಗೆ ತೂಗುತ್ತ
ಬಾಳಿ ತಾಳುವ ಅಶ್ವತ್ಥದ ಕೆಳಗೆ
ನೆರಳಿಗೆ ಸುಖಿಸಿ, ಅಪರೂಪಕ್ಕೆ
ಉದಾಸೀನದಲ್ಲಿ ಹಾಯಾಗಿ ಕಾಲುಚಾಚಿ ಕೂತವ
ಸಂಸಾರಿ. read more »
ಬೇರೊಬ್ಬ
ಸುಲಭ ಲಭ್ಯವಾದ ಯಾವ "ಹು ಈಸ್ ಹು"ನಲ್ಲಾದರೂ
ಅವನ ಮಾಹಿತಿ ಸಿಗುತ್ತದೆ:
ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು
ಪರಾರಿಯಾದ್ದು
ಭಿಕಾರಿಯಾಗಿ ಅಲೆದದ್ದು, ನರಳಿದ್ದು
ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ ಆಗುತ್ತ
ಸಮಾಜಕ್ಕೆ ಮಾದರಿಯಾದ ಘನವಂತನಾದದ್ದು.
ಮತ್ತೇನು ಮಾಡಿದ ಹೇಳಬೇಕಾಗಿಲ್ಲ,
ಮಾದರಿಯಾದವನು ಮಾಡಬೇಕಾದ್ದನ್ನೆಲ್ಲ ಅವನು ಮಾಡಿದ
ನದಿದಂಡೆಯ ಮೇಲೆ ಗಾಳಹಾಕಿ ಕೂತು ಮೀನು ಹಿಡಿದ
ಅಕ್ಕಪಕ್ಕದವರಂತೆ
ರಜೆಯಲ್ಲಿ read more »


