ಅಪ್ವರ್ಡ್‌ ಮುಖೇನ ಆತ್ಮ ಶೋಧನವಾದ ಸಂಶೋಧನೆ

ಬ್ರಾಡ್‌ ಬರಿ ಪೈಪ್‌ ಸೇದುತ್ತ ತನ್ನ ಟೈಪ್‌ ರೈಟರ್‌ ಎದುರು ಕೂತು ಹೇಳಿದ್ದು ನೆನಪಾಗುತ್ತದೆ: `ಎಡ್ವರ್ಡ್‌ ಅಪ್ವರ್ಡ್‌ ಎಂಬ ವಿಲಕ್ಷಣ ಲೇಖಕನೊಬ್ಬನಿದ್ದ, ಮುವ್ವತ್ತರ ದಶಕದಲ್ಲಿ. ನಾವು ಬ್ರಿಟಿಷರು ಸೈದ್ಧಾಂತಿಕವಾಗಿ ಯೂರೋಪಿಯನ್ನರಂತೆ ಚಿಂತಿಸುವುದೇ ಇಲ್ಲ. ನಿತ್ಯಾನುಭವದ ಸತ್ಯಕ್ಕೆ ಮಾತ್ರ ನಾವು ಬದ್ಧರು. ಮಿಲ್‌ ಮತ್ತು ಬೆಂಥಾಮ್‌ನಂತಹ ಯುಟಿಲಿಟೇರಿಯನ್ನರು ಮಾತ್ರ ನಮ್ಮ ಹೀರೋಗಳು. ಅಪ್ವರ್ಡ್‌ ಅದಕ್ಕೆ ವಿನಾಯಿತಿ. ಮುವ್ವತ್ತರ ದಶಕವೇ ಅದಕ್ಕೆ ವಿನಾಯಿತಿ. ಅಂತಹ ಒಂದು ದಶಕವನ್ನು ಬ್ರಿಟನ್‌ ಮತ್ತೆ ಕಂಡಿಲ್ಲ.'

-3-
(ಕಳೆದ ಸಂಚಿಕೆಯಿಂದ)
ನನ್ನದೊಂದು ನೆನಪು. ಜಾರ್ಜ್‌ ಥಾಮ್ಸನ್ನಿನ ಮನೆಯಲ್ಲಿ ಅವನ ಕಮ್ಯುನಿಸ್ಟ್‌ ಗೆಳೆಯರೆಲ್ಲ (ಹೆಚ್ಚು ಜನ ಹಂಗೆರಿಯನ್ನು ಸೋವಿಯತ್ತರು ಆಕ್ರಮಣ ಮಾಡಿದ ನಂತರ ಪಕ್ಷ ಬಿಟ್ಟವರು) ಸಭೆ ಸೇರಿದ್ದಾರೆ. ಜಾರ್ಜ್‌ ಥಾಮ್ಸನ್‌ ಅವತ್ತು ತನ್ನ ಹೊಸದೊಂದು ಥೀಸಿಸ್‌ ಚರ್ಚಿಸುವುದಿದೆ- ಸ್ಟಾಲಿನ್‌ ಬಗ್ಗೆ. ಕೈಲಾಸಪತಿ ನನ್ನನ್ನೂ ಈ ಆತ್ಮೀಯ ಕೂಟಕ್ಕೆ ಕರೆದಿದ್ದಾನೆ. ಜಾರ್ಜ್‌ ಥಾಮ್ಸನ್‌ ತನ್ನದೇ ವಿಧಾನ ದಲ್ಲಿ ವಿವರಿಸುತ್ತಾನೆ: ಚರಿತ್ರೆಯ ಮಹಾ ಪುರುಷ ರನ್ನು ಆಯಾ ಕಾಲದ ಇಕ್ಕಟ್ಟುಗಳ ಸಂದರ್ಭದಲ್ಲೇ ಇಟ್ಟು ನೋಡಬೇಕಾಗುತ್ತದೆ. ಉದಾಹರಣೆಗೆ: ತನ್ನ ಕಾಲವನ್ನೇ ಅಲ್ಲಾಡಿಸಿದ ನೆಪೋಲಿಯನ್‌. ಅವನ ತಪ್ಪುಗಳನ್ನು ನಾವು ಕ್ಷಮ್ಯವೆನ್ನುವಂತೆ ವಿವರಿಸುವುದಿ ಲ್ಲವೆ? ಹಾಗೇ ಸ್ಟಾಲಿನ್ನನ್ನೂ ನಾವು ಅರಿಯಬೇಕು. ಈಗಿನ ಸೋವಿಯತ್‌ ರಿವಿಷನಿಷ್ಟರಂತೆ ಅಲ್ಲ. ಸ್ಟಾಲಿನ್ನಿನ ತಪ್ಪುಗಳನ್ನು ಅರಿತೂ ಅವನನ್ನು ಮೆಚ್ಚಿ ಮಾವೋ ಅರಿಯುವ ಹಾಗೆ.
ನನಗೇಕೊ ಈ ಲಾಜಿಕ್‌ ಸರಿಯೆನ್ನಿಸಲಿಲ್ಲ. ಅಂಜುತ್ತಂಜುತ್ತ ಕೈ ಎತ್ತಿದೆ. ಅಲ್ಲಿ ಸೇರಿದ ಘಟಾನುಘಟಿ ತಾರ್ಕಿಕರಾದ ಎಲ್ಲರೂ ನನ್ನನ್ನು ದಿಟ್ಟಿಸುತ್ತಿದ್ದಂತೆ ಹೇಳಿದೆ: `ಮಾರ್ಕ್ಸ್‌ನ ವಾದದಿಂದ ಪ್ರಣೀತವಾದ ಕಮ್ಯುನಿಸಂ ಸೈಂಟಿಫಿಕ್‌ ಎಂದು ನಿಮ್ಮ ವಾದ. ನೆಪೋಲಿಯನ್‌ಗೆ ಸಿದ್ಧಾಂತದ ಬಲವಿ ರಲಿಲ್ಲ. ಅದೊಂದು ವೈಯಕ್ತಿಕ ತೀಟೆ, ಸಾಹಸಗಳ ಕಥೆ. ಆದರೆ ರಷ್ಯದ ಕಮ್ಯುನಿಸಂಗೆ ಸಿದ್ಧಾಂತ ಮತ್ತು ಕ್ರಿಯೆಗಳ ಜೋಡಣೆಯ ಸೈಂಟಿಫಿಕ್‌ ಚೌಕಟ್ಟನ್ನು ಲೆನಿನ್‌ ಒದಗಿಸಿದ; ಆಗಲೇಬೇಕಾದ್ದನ್ನು ಆದಷ್ಟು ಬೇಗ ಆಗುವಂತೆ ಮಾಡುವ ಸಿದ್ಧಾಂತ ಅದು ಎನ್ನುತ್ತೀರಿ (ಈಛಿಞಟ್ಚ್ಟಠಿಜ್ಚಿ ್ಚಛ್ಞಿಠ್ಟಿ್ಝಜಿಞ ್ಞ ್ಞಜ್ಠ್ಟ ಟ್ಛ ಠಿಛಿ ್ಟಟ್ಝಛಿಠಿ್ಟಜಿಠಿ ಛಿಠ್ಚಿ). ಆದರೆ ಈಗ ನೆಪೋಲಿಯನ್‌ ಜೊತೆ ಸ್ಟಾಲಿನ್ನನ್ನು ಹೋಲಿಸುತ್ತೀರಿ. ಸ್ಟಾಲಿನ್‌, ನೆಪೋಲಿಯನ್‌ ನಂತೆಯೇ ಪರ್ಸನಾಲಿಟಿ ಕಲ್ಟ್‌ ನಲ್ಲಿ ಪರವಶನಾಗಿ ಮಾಡಿದ ತಪ್ಪುಗಳು, ಈ ಸೈಂಟಿಫಿಕ್‌ ಸೋಷಲಿಸಂ ನಲ್ಲಿ ಇಣುಕಲು ಸಾಧ್ಯವಾದ ಬಿರುಕುಗಳು ಲೆನಿನ್‌ ವಾದದಲ್ಲಿ, ಅವನ ಕ್ರಾಂತಿಪೂರಕವಾದ ಸಂಘಟಣಾ ಕ್ರಮದಲ್ಲೇ ಇರಬಹುದಲ್ಲವೆ?'
ಥಾಮ್ಸನ್‌ ಗೌರವದಿಂದ ಹೇಳಿದ: `ಒಳ್ಳೆಯ ಪ್ರಶ್ನೆ. ಉತ್ತರ ಹುಡುಕಿಕೊಳ್ಳಬೇಕು. ಯೋಚಿಸುತ್ತೇನೆ.'
ಆ ಸಭೆಯಲ್ಲಿದ್ದ ಹಿರಿಯ ಪ್ರೊಫೆಸರ್‌ ಒಬ್ಬ ನನ್ನ ಮಾತಿಗೆ ಸೇರಿಸಿದ ಇನ್ನೊಂದು ಮಾತನ್ನು ನಾನು ಮರೆಯಲಾರೆ. ನಾನು ಸ್ಟಾಲಿನ್‌ ಎಂದು ಕರೆದ ದುಷ್ಟ ನನ್ನು ಅವನು `ಜೋ' ಎಂಬ ಆತ್ಮೀಯ ಸಲಿಗೆಯಲ್ಲಿ ಗುರುತಿಸಿ ಮಾತಾಡಿದ್ದು ನನಗೆ ವಿಶೇಷವೆನ್ನಿಸಿತ್ತು. ಅವನ ವಾದಕ್ಕೊಂದು ಚರಿತ್ರೆಯೂ ಇತ್ತು; ಹಂಗೇರಿಯಲ್ಲಿ ಸೋವಿಯತ್‌ ಆಕ್ರಮಣದಿಂದ ಹುಟ್ಟಿದ ಸಂಕಟವೂ ಇತ್ತು. ಅಲ್ಲದೆ ಅಲ್ಲಿ ನೆರೆದಿದ್ದ ೀಮಂತರು ಕ್ಷೇಮದಲ್ಲಿ ಚೀನಾ ಪರವಾಗಿಯೂ ವಿಯಟ್ನಾಂ ಪರವಾಗಿಯೂ ಅಮೆರಿಕಾ ವಿರೋಧ ವಾಗಿಯೂ ತಮ್ಮ ಮಾರ್ಕ್ಸ್‌ ವಾದವನ್ನು ಉಳಿಸಿ ಕೊಳ್ಳುವುದು ಸಾಧ್ಯವಿತ್ತು.
`ಕಮ್‌ ಆನ್‌ ಜಾರ್ಜ್‌. ಪರ್ಸನಾಲಿಟಿ ಕಲ್ಟ್‌ ತಪ್ಪೆಂದು ಹೊಳೆಯಲಿಕ್ಕೆ ನಿನಗೆ ಇಷ್ಟು ವರ್ಷಗಳು ಬೇಕಾದವೊ? ಪ್ರತಿ ವರ್ಷ ಜೋನ ಹುಟ್ಟಿದ ಹಬ್ಬದ ದಿನ ನೀನೇ ನಮ್ಮ್ಮೆಲ್ಲರಿಂದ ಹಣ ಸಂಗ್ರಹಿಸಿ ಜೋಗೆ ಉಡುಗೊರೆ ಕಳಿಸುವ ಏರ್ಪಾಡು ಮಾಡುತ್ತಿದ್ದಿ. ನಾನೊಂದು ಸಾರಿ ಇದು ತಪ್ಪು, ಇದು ಪರ್ಸನಾಲಿಟಿ ಕಲ್ಟ್‌ ಎಂದು ಹೇಳಿದಾಗ ನೀನೇನು ಆಗ ಹೇಳಿದಿ? ನೆನಪು ಮಾಡಿಕೊ.'
ಬ್ರೆಜ್ನೇವ್‌ ಕಾಲದಲ್ಲಿ ರಷ್ಯಕ್ಕೆ ಹೋದಾಗಲೂ ಸತ್ತ ಸ್ಟಾಲಿನ್‌ ನನಗೆ ಎದುರಾಗುತ್ತಿದ್ದ. ನಿಗೂಢವಾಗಿ ಸತ್ತ ಅವನ ಹೆಂಡತಿಯ ಗೋರಿಯ ಮೇಲೆ ಯಾರೋ ಆ ದಿನವೇ ತಂದಿಟ್ಟ ಅರಳಿದ ಗುಲಾಬಿ ನೋಡಿದಾಗ; ಕಟುವಾದ ವಾಸನೆಯ ಸಿಗರೇಟನ್ನು ಕೊಳ್ಳಲೇಬೇಕಾಗಿ ಬಂದಾಗಲೆಲ್ಲ `ಇದನ್ನೆ ಸ್ಟಾಲಿನ್‌ ಸೇದುತ್ತ ಇದ್ದುದು' ಎಂದು ನಮ್ಮ ದುಬಾಷಿ ಹೇಳಿದಾಗ; `ಇದು ಸ್ಟಾಲಿನ್‌ಗೆ ಪ್ರಿಯವಾಗಿದ್ದ ವೋಡ್ಕ' ಎಂದು ಒಂದು ಸಾರಿ ಮುಚ್ಚಳ ತೆರೆದರೆ ಮತ್ತೆ ಮುಚ್ಚಲು ಬಾರದ, ಇಡೀ ಸೀಸೆ ಕುಡಿಯ ಬೇಕಾದ ಮೆಣಸಿನ ಘಾಟಿನ ಸೀಸೆಯನ್ನು ಕೊಂಡಾಗ, ಜಾರ್ಜಿಯಾದಲ್ಲಿ ಇನ್ನೂ ಹೀರೋ ಆಗಿ ಉಳಿದ ಅವನ ಚಿತ್ರವನ್ನು ಟ್ಯಾಕ್ಸಿಗಳಲ್ಲಿ ಕಂಡಾಗ ಅವನು ತನ್ನ ಧಡೂತಿ ಮೀಸೆಯಲ್ಲೆ ನಮಗೆ ಎದುರಾಗುತ್ತಿದ್ದ. ಎರಡನೇ ಮಹಾಯುದ್ಧವನ್ನು ಬಹಳ ಕಾಲ ಮರೆಯದವರೆಂದರೆ ಸೋವಿಯತ್ತರು. ಅಷ್ಟು ನಿರ್ದಯನಾಗಿದ್ದ ವ್ಯಕ್ತಿ ಈ ಎಲ್ಲರಿಗೂ `ಜೋ' ಆಗಿಯೂ ಉಳಿದಿದ್ದ.
***
ಸ್ಟಾಲಿನ್‌ನನ್ನು ಜೋ ಎಂದೇ ಕರೆದು ಥಾಮ್ಸನ್ನಿನ ಮನೆಯಲ್ಲಿ ಆಡಿಕೊಂಡ ಸ್ನೇಹದ ನಿಷ್ಠುರ ಜಗಳವನ್ನು ನಾನು ದಿಢೀರನೆ ಮತ್ತೆ ನೆನಪು ಮಾಡಿಕೊಂಡಿದ್ದು ಹಲವು ವರ್ಷಗಳ ನಂತರ. ಗಾರ್ಬೆಚೋವ್‌ ಕಾಲದಲ್ಲಿ. ಸೋವಿಯತ್‌ ಒಕ್ಕೂಟದ ಪ್ರಸಿದ್ಧವಾದ ಪತ್ರಿಕೆ ಯೊಂದರಲ್ಲಿ ನನ್ನ ಸಂಸ್ಕಾರ ಮೀರ ಎಂಬಾಕೆಯ ಭಾಷಾಂತರದಲ್ಲಿ ಪ್ರಕಟವಾದ ನಂತರ. ಆ ಸಭೆಯಲ್ಲಿ ಸ್ಟಾಲಿನ್‌ ಕಾಲದ ಅತಿರೇಕಗಳ ಚರ್ಚೆ ನಡೆದಿತ್ತು. ನಾನು ಪುರಂದರ ದಾಸರ `ಉತ್ತಮ ಪ್ರಭುತ್ವ ಲೊಳಲೊಟ್ಟೆ' ಎಂಬ ಸಾಲನ್ನು ಉದ್ಧರಿಸಿ, ಪ್ರಭುತ್ವ ಉತ್ತಮವಾಗಿ ದ್ದರೂ ಅದು ತನ್ನ ಆಂತರ್ಯದ ಸತ್ಯಗಳಿಗೆ ಲೊಳಲೊಟ್ಟೆ ಅಥವಾ ಯಾವ ಪ್ರಭುತ್ವವಾದರೂ ಯಾವ ಕಾಲದಲ್ಲಾ ದರೂ ಉತ್ತಮವಾದೀತೆಂದು ತಿಳಿಯುವುದೇ ಲೊಳಲೊಟ್ಟೆ; ಇದನ್ನು ನಿಮ್ಮ ಲೇಖಕ ವರ್ಗ ತಿಳಿದಿದ್ದರೆ ಲೆನಿನ್‌ನನ್ನ ನೀವು ಆರಾಸುತ್ತಿರಲಿಲ್ಲ; ಸ್ಟಾಲಿನ್ನಿನ ಕ್ರೌರ್ಯಗಳಿಗೆ ಕುರುಡಾಗುತ್ತಿರಲಿಲ್ಲ ಎಂದೆ. ನಾನು ಹೀಗೆನ್ನಬಹುದಾದ ಕಾಲದಲ್ಲಿ ಮಾವೋನ ಸಾಂಸ್ಕೃತಿಕ ಕ್ರಾಂತಿಯ ಹಿಂಸೆ ಬಯಲಾಗಿತ್ತು. ಗಾಂಯ ಭಾರತ ಎಮರ್ಜನ್ಸಿಯನ್ನು ಅನುಭವಿಸಿತ್ತು.
ಅಲ್ಲಿದ್ದ ಒಬ್ಬ ವೃದ್ಧ ಲೇಖಕ ಅತ್ಯಂತ ನಾಟಕೀಯ ವಾಗಿ ಹೇಗೆ ಅಲ್ಲಿ ಕೂತ ಲೇಖಕರೆಲ್ಲ ತಲೆ ತಗ್ಗಿಸಿ ಅವನನ್ನು ಕೇಳಿಸಿಕೊಳ್ಳುವಂತೆ ಮಾಡಿದ ಎಂಬುದೇ ನನ್ನ ಕಥೆ.
ಅದು ನಡೆದದ್ದು ಹೀಗೆ: ಎಲ್ಲರೂ ಕೂತಿದ್ದಾಗ ಅವನು ಎದ್ದು ನಿಂತ. ಗಂಟಲನ್ನು ಕೆರೆದು ಸರಿ ಮಾಡಿ ಕೊಂಡು ಎತ್ತರದ ದನಿಯಲ್ಲಿ ಹಾಡಲು ಶುರುಮಾಡಿದ. ಒಂದೆರಡು ನಿಮಿಷ ಭಾವುಕವಾಗಿ ಹಾಡಿ ನಿಲ್ಲಿಸಿದ. ಎಲ್ಲರನ್ನೂ ನೋಡಿದ. `ನೀವು ಎಲ್ಲರೂ ಈಗ ತಲೆ ತಗ್ಗಿಸಿ ಕೇಳಿಸಿಕೊಂಡ ಈ ಹಾಡನ್ನು ನಾವೆಲ್ಲರೂ ಹಾಡುತ್ತಿದ್ದೆವು ಅಲ್ಲವೆ? ನಾಚಿಕೆ, ಮಾನ ಏನಾದರೂ ನಮಗೆ ಆಗ ಇತ್ತೆ? ಈ ಹಾಡಿನಲ್ಲಿರುವ ಜೋನನ್ನ್ನು ಹೊಗಳುವ ಒಂದೊಂದು ಮಾತೂ ಈಗ ಹೇಸಿಗೆ ಹುಟ್ಟಿಸುತ್ತಿದೆ, ಅಲ್ಲವೆ? ಇಷ್ಟೂ ವರ್ಷಗಳ ಕಾಲ ನಾವು ಯಾವುದಕ್ಕೆ ಕಾದಿದ್ದು ಹೇಳಿ? ನಮ್ಮದೇ ಒಂದು ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡೋದು ಸಾಧ್ಯವಾಗುವ ಕಾಲಕ್ಕೆ ಅಲ್ಲವೆ?'
***
ಹೀಗೆ ನಾನು ಅರಿಯಬಲ್ಲಂತೆ ನನ್ನ ಮನಸ್ಸನ್ನು ಚೂಪು ಮಾಡಿದ, ಸ್ಟಾಲಿನ್‌ನಿಂದ ಮೂಕನಾದರೂ ತನ್ನ ಕ್ರಾಂತಿಯ ನಂಬಿಕೆ ಕಳೆದುಕೊಳ್ಳದ, ಆಧ್ಯಾತ್ಮಿಕತೆಗೆ ಕೊನೆಗೂ ಒಲಿಯದೆ ಉಳಿದ, ಪ್ರಸಿದ್ಧನಾಗದೆ ಮೂಲೆ ಗುಂಪಾದ, ಆದರೆ ಪ್ರಸಿದ್ಧರಾದ ಗೆಳೆಯರನ್ನು ಪಡೆದ ಅಪ್ವರ್ಡ್‌ಗೆ ಹಿಂದಿರುಗುವೆ.
ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಲಾರೆನ್ಸ್‌ ಬಗ್ಗೆ ನಾನು ರಿಸರ್ಚ್‌ ಮಾಡಲೆಂದು ಇಂಗ್ಲೆಂಡಿಗೆ ಹೋದದ್ದು. ಅಲ್ಲಿ ಹೋದ ಮೇಲೆ ಕೆ. ಎಂ. ಪಣಿಕ್ಕರ್‌ ನನಗೆ ಹೇಳಿದ್ದು ನಿಜವೆನ್ನಿಸಿತು. ಲಾರೆನ್ಸ್‌ ಮೇಲಿನ ಕೆಲಸ ಒಂದು ಇಂಡಸ್ಟ್ರಿಯಂತೆಯೇ ಅಮೆರಿಕಾದಲ್ಲಿ ಬೆಳೆದಿತ್ತು. ಕಾಲಿಡಲು ಜಾಗವಿಲ್ಲದ ಬೌದ್ಧಿಕ ಸ್ಲಮ್‌ನಂತೆ ಲಾರೆನ್ಸ್‌ ಬಗೆಗಿನ ವಿಮರ್ಶಾಲೋಕ ನನಗೆ ಭಾಸವಾಯಿತು.
ಈಗ ಕಾಲವಾದ ನನ್ನ ವಾರಿಗೆಯ ಮಾಲ್ಕಂ ಬ್ರಾಡ್‌ಬರಿ ಅರವತ್ತರ ದಶಕದ ಇಂಗ್ಲಿಷ್‌ ವಾಙ್ಮಯ ಲೋಕದಲ್ಲಿ ಪ್ರಸಿದ್ಧನಾದ ಕಾದಂಬರಿಕಾರ, ಉದಾರ ವಾದಿಯಾದ ಎಡಪಂಥದ ಚಿಂತಕ. ಕೆಲ ಕಾಲ ನನ್ನ ಗೈಡ್‌. ಈತ ನನ್ನ ಪ್ರಿಯ ಗೆಳೆಯರಲ್ಲೊಬ್ಬನೂ ಆಗಿಬಿಟ್ಟ (ಕೊನೆಯಲ್ಲಿ ಇನ್ನೊಬ್ಬ ಪ್ರಸಿದ್ಧ ವಿಮರ್ಶಕ ಹಾಗೂ ಕಾಮಿಕ್‌ ಕಾದಂಬರಿಕಾರ ಡೇವಿಡ್‌ ಲಾಡ್ಜ್‌ ನನ್ನ ಗೈಡ್‌.) ಬ್ರಾಡ್‌ ಬರಿ ಪೈಪ್‌ ಸೇದುತ್ತ ತನ್ನ ಟೈಪ್‌ ರೈಟರ್‌ ಎದುರು ಕೂತು ಹೇಳಿದ್ದು ನೆನಪಾಗುತ್ತದೆ: `ಎಡ್ವರ್ಡ್‌ ಅಪ್ವರ್ಡ್‌ ಎಂಬ ವಿಲಕ್ಷಣ ಲೇಖಕನೊಬ್ಬನಿದ್ದ, ಮುವ್ವತ್ತರ ದಶಕ ದಲ್ಲಿ. ನಾವು ಬ್ರಿಟಿಷರು ಸೈದ್ಧಾಂತಿಕವಾಗಿ ಯೂರೋಪಿ ಯನ್ನರಂತೆ ಚಿಂತಿಸುವುದೇ ಇಲ್ಲ. ನಿತ್ಯಾನುಭವದ ಸತ್ಯಕ್ಕೆ ಮಾತ್ರ ನಾವು ಬದ್ಧರು. ಮಿಲ್‌ ಮತ್ತು ಬೆಂಥಾಮ್‌ನಂತಹ ಯುಟಿಲಿಟೇರಿಯನ್ನರು ಮಾತ್ರ ನಮ್ಮ ಹೀರೋಗಳು. ಅಪ್ವರ್ಡ್‌ ಅದಕ್ಕೆ ವಿನಾಯಿತಿ. ಮುವ್ವತ್ತರ ದಶಕವೇ ಅದಕ್ಕೆ ವಿನಾಯಿತಿ. ಅಂತಹ ಒಂದು ದಶಕವನ್ನು ಬ್ರಿಟನ್‌ ಮತ್ತೆ ಕಂಡಿಲ್ಲ. ಅವನೀಗ ಎಲ್ಲಿದ್ದಾನೆಂದು ಯಾರಿಗೂ ತಿಳಿಯದು. ಅವನು ಬರೆಯುತ್ತಿದ್ದ ಕಾಲದ ಬಗ್ಗೆ, ಆಗಿನ ಜಿಜ್ಞಾಸೆಗಳ ಬಗ್ಗೆ ರಿಸರ್ಚ್‌ ಮಾಡು'.
ನನಗೂ ಆಗ ಚೀನಾ ಕ್ರಾಂತಿಯ ಬಗ್ಗೆ ವಿಶೇಷವಾದ ಆಸಕ್ತಿಯಿತ್ತು. ಆಗಲಿ ಎಂದು ಸೋಮಾರಿ ಕನಸಿಗನಾದ ನಾನು ಅಳೆದು ಹೊಯ್ದು ಅಪ್ವರ್ಡ್‌ನ ಮೊದಲ ಕಥೆಗಳನ್ನು ಪ್ರಕಟಿಸಿದವರ ಕೇರ್‌ ಆಫ್‌ ವಿಳಾಸಕ್ಕೆ ಅಪ್ವರ್ಡ್‌ಗೊಂದು ಕಾಗದ ಬರೆದೆ: `ನಿನ್ನನ್ನು ನೋಡು ವುದು ಸಾಧ್ಯವೆ?...' ಹೀಗೆ ಒಂದೆರಡು ಮಾತಿನ ಕಾಗದ ಅದು.
ಕೂಡಲೆ ಉತ್ತರ ಬಂತು. `ನಿನಗೆ ಹತ್ತಿರದ ವುಲ್ವರ್‌ ಹ್ಯಾಂಪ್ಟನ್‌ಗೆ ನಾನು ನನ್ನ ಮಗನ ಮನೆಗೆ ಬರುತ್ತ ಇದ್ದೀನಿ. ನೀನು ಈ ರೈಲಲ್ಲಿ ಈ ಹೊತ್ತಿಗೆ ಬಂದರೆ, ಕಾರ್ಮಿಕರ ಕ್ಯಾಪ್‌ ಹಾಕಿಕೊಂಡು ಕೈಯಲ್ಲಿ ಎನ್‌ಕೌಂಟರ್‌ ಪತ್ರಿಕೆ ಹಿಡಿದುಕೊಂಡು ನಾನು ಪ್ಲಾಟ್‌ಫಾರಂನಲ್ಲಿ ಕಾದಿರು ತ್ತೀನಿ. ಇಲ್ಲ್ಲಿರುವ ಹಲವರು ನಿನ್ನ ದೇಶದವರು. ನೀನೂ ಒಂದು ಎನ್‌ಕೌಂಟರ್‌ ಪತ್ರಿಕೆ ಹಿಡಿದುಕೊಂಡಿರು. ಆಗ ಗುರುತಾಗುವುದು ಸುಲಭವಾಗುತ್ತದೆ.'
ಆ ಹೊತ್ತಿಗೆ ಆ ರೈಲಲ್ಲಿ ಆ ಪತ್ರಿಕೆ ಹಿಡಿದುಕೊಂಡು ಆ ಕ್ಯಾಪ್‌ ಧರಿಸಿದ್ದ ಸುಂದರವಾದ ಮುಗುಳ್ನಗೆಯ, ಗುಂಡುಮುಖದ, ಇಷರ್ವುಡ್‌ನ ಕಲ್ಪನಾಲೋಕದ ಮಾರ್ಟ್‌ಮಿಯರ್‌ ತೊರೆದು ಸೋವಿಯತ್ತಾಗಲಾ ರದೆ, ಆದರೆ ತಾನು ನಂಬಿದ ತತ್ವ ಬಿಡಲಾರದೆ, ಒಳಬದುಕನ್ನೂ ಹೊಳೆಯಿಸಬಲ್ಲ ವಾಸ್ತವ ಮಾರ್ಗದ ಶೈಲಿಯ ಹುಡುಕಾಟದಲ್ಲಿ ಇದ್ದ ಎಡ್ವರ್ಡ್‌ ಅಪ್ವರ್ಡ್‌ನ ಕೈಕುಲುಕಿದೆ. ಅವನು ಅರವತ್ತು ದಾಟಿದ್ದ; ನಾನು ಮುವ್ವತ್ತು ದಾಟಿದ್ದೆ. ಹಳೆಯ ಕಾರೊಂದರಲ್ಲಿ ನನ್ನನ್ನು ಕೂರಿಸಿಕೊಂಡು ಅವನ ಮಗನ ಮನೆಗೆ, ಮನೆಗೆ ಮನೆ ಅಂಟಿಕೊಂಡ ಸಾಲಿನಲ್ಲಿದ್ದ ಎಲ್ಲ ಮನೆಯಂತೆ ಇರುವ ಇನ್ನೊಂದು ಮನೆಗೆ ಕರೆದುಕೊಂಡು ಹೋದ. ಅವನ ಸೊಸೆ ಆಗ ಗರ್ಭಿಣಿ. ಅಪ್ವರ್ಡ್‌ನ ಹೆಂಡತಿ, ಅವನ ಜೊತೆ ಕಾರ್ಮಿಕ ಸಂಘಟನೆಯಲ್ಲಿ ನಿರತಳಾಗಿದ್ದವಳು, ಆಗಲೇ ಮೊಮ್ಮಕ್ಕಳನ್ನು ಕಂಡವಳು, ಹೊಸದೊಂದನ್ನು ನಿರೀಕ್ಷಿಸುತ್ತಿದ್ದವಳು ನಮಗೆ ಟೀ ಮಾಡಿಕೊಟ್ಟಳು. ಅಲ್ಲಿಂದ ಶುರುವಾಯಿತು ನಮ್ಮ ಸ್ನೇಹ ಮತ್ತು ನನ್ನ ಆತ್ಮೀಯ ಅನುಭವವೂ ಆದ ರಿಸರ್ಚ್‌.
ಅವನು ಬರೆದ ಕಾಗದಗಳು ನನ್ನಲ್ಲಿವೆ. ಏಪ್ರಿಲ್‌ 1966ರಲ್ಲಿ, ಅವನ ಗುರುತಾಗಿ ಸುಮಾರು ಎರಡು ವರ್ಷಗಳಾದ ನಂತರ ಬರೆದೊಂದು ಕಾಗದದಲ್ಲಿ ಹೀಗೆ ಹೇಳುತ್ತಾನೆ: 'ಛಿಛಿಠಿಜ್ಞಿಜ ಟ್ಠ ್ಝಡಿ ಞಛಿ್ಞಠಿ ್ಝಟಠಿ ಠಿಟ ಞಛಿ ್ಞ ಜಿಠಿ ಞ ಛಿಠಿ ಛ್ಝಿ ಞಛಿ ಠಿಟ ್ಛಜ್ಞಿ ಞ ಡಿ ಚಿ್ಚ ಠಿಟ ಡಿಠಿ ಐ ್ಟಛಿ್ಝ್ಝ ಡಿ್ಞಠಿ ಠಿಟ ಟ ಜ್ಞಿ ಞ ಡ್ಟಿಜಿಠಿಜ್ಞಿಜ.'. ಅವನಿಗೆ ತನ್ನ ಸೃಜನಾತ್ಮಕತೆಯ ಬಗ್ಗೆಯೇ ಅನುಮಾನ ಹುಟ್ಟಿಸಿದ ತಾತ್ವಿಕತೆಯ ಬಗ್ಗೆ ನನ್ನ ಟೀಕೆಗೆ ಅವನು ಕೊಟ್ಟ ಉತ್ತರ ಇದು. ಆದರೆ ಈ ಪತ್ರದಲ್ಲೂ ಅವನು ಮಾರ್ಕ್ಸ್‌ನ ಕ್ರಾಂತಿಯ ಕನಸನ್ನು ಬಿಟ್ಟುಕೊಟ್ಟಿರಲಿಲ್ಲ. ಲಿಬರಲ್‌ ಮನೋಧರ್ಮದ ಒಪ್ಪಂದ ಮಾಡಿಕೊಂಡಿರಲಿಲ್ಲ.
ನನ್ನ ಬದುಕಿನ ಮಹತ್ವದ ದಿನಗಳು ಇವು. ನರ್ಸರಿಗೆ ಹೋಗಲೊಲ್ಲದ, ತನ್ನ ಕಲ್ಪನಾ ಲೋಕದಲ್ಲಿ ಹಲವು ಪಾತ್ರಗಳನ್ನು ಸೃಷ್ಟಿಸಿ ತುಂಟಾಟದಲ್ಲಿ ಎಲ್ಲರನ್ನೂ ರಮಿಸುವ ನನ್ನ ಮಗ, ಇನ್ನು ಮೂರು ತಿಂಗಳಲ್ಲಿ ಹೊರಬರುವ ನಿರೀಕ್ಷೆಯನ್ನು ನನ್ನ ಹೆಂಡತಿಯ ಹಿತವಾದ ಆಯಾಸದ ನಡುಗೆಯಲ್ಲಿ ಕಣ್ಣಿಗೆ ಕಾಣುವಂತೆ ಉಬ್ಬಿಸುತ್ತಿದ್ದ ನನ್ನ ಮಗಳು, ಈ ಭಾರದ ಜೊತೆ ನನ್ನ ರಿಸರ್ಚ್‌ನ ಚಾಪ್ಟರುಗಳನ್ನು ಲೈಬ್ರರಿಗೆ ತೆಗೆದುಕೊಂಡು ಹೋಗಿ ಟೈಪ್‌ ಮಾಡಿಸಿ ತರುತ್ತಿದ್ದ ನನ್ನ ಹೆಂಡತಿಯ ಕಾಯಕ, ಈ ಎಲ್ಲದರ ನಡುವೆ ನಾನು ಆ ದಿನಗಳಲ್ಲಿ ಬರೆದ ಕನ್ನಡದ ನನ್ನ ಕೃತಿಗಳು, ಆಗೀಗ ಭೇಟಿಯಾಗುತ್ತಿದ್ದ ನಟರಾಜ್‌, ರಾಮಚಂದ್ರ ಶರ್ಮ, ಡಿ. ಎ. ಶಂಕರ್‌, ಬಿ.ಕೆ. ಚಂದ್ರಶೇಖರ್‌ ಜೊತೆ ನಡೆಸಿದ ಅಹೋ ರಾತ್ರಿಯ ಹರಟೆಗಳು, ಅವರ ಸಹವಾಸದಲ್ಲಿ ತಯಾರಾ ಗುತ್ತಿದ್ದ ನನ್ನ ತುಡುವಿನ ಚಕ್ಕುಲಿ, ಕೋಡುಬಳೆ, ಜೊತೆಗೆ ಡ್ರಾಫ್ಟ್‌ ಬಿಯರ್‌, ಸತತ ನಮ್ಮ ಮನೆಯಲ್ಲಿದ್ದು ನನ್ನ ಹೆಂಡತಿಗೆ ಕಿರಿಕಿರಿಯಾದರೂ ಅವಳ ವಿಶ್ವಾಸವನ್ನು ಗೆದ್ದ ಟಾಮ್‌ ಎಂಬ ವಿದ್ಯಾರ್ಥಿ ಮತ್ತು ಅಭಿಮಾನಿ, ಅಡುಗೆ ಮಾಡಿ ಅದನ್ನು ನಮ್ಮ ಮನೆಗೆ ತಂದು, ನಮ್ಮ ಅಡುಗೆ ಯನ್ನೂ ಬಡಿಸಿಕೊಂಡು ಊಟ ಮಾಡಿಹೋಗುತ್ತಿದ್ದ ನನ್ನ ಅಧ್ಯಾಪಕ ಹಾಗೂ ಮಿತ್ರ, ಮಾರ್ಟಿನ್‌ ಗ್ರೀನ್‌ (ಮುಂದೆ ಗಾಂೀಜಿ ಬಗ್ಗೆ ಮಹತ್ವದ ಪುಸ್ತಕಗಳನ್ನು ಬರೆದವನು ಇವನು) -ಈ ಎಲ್ಲದರ ಜೊತೆ ದಣಿವೇ ಇಲ್ಲದಂತೆ ಬೆಳೆದ ಕಾಲ ಅದು.

Sir, nimage januma dinada hardika shubhashayagalu. nimminda kannada naadu,kannada bhashe kannada jana dhanya. kannada nadu nudige nimminda innu hechinna seve sallali nimage innu halavaaru prashastigalu sanmanagalu arasi barali innu hechina stanamana labhisali endu hrudayapoorvakavaagi prarthisuthene.

Vijayendra

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.