ಇದು ಜನತಾ ಪ್ರಣಾಳಿಕೆಯ ಕರಡು. ಓದಿ, ನಿಮಗೇನಾದರೂ ಸೇರಿಸಬೇಕನ್ನಿಸದರೆ ಅದನ್ನು ಪ್ರತಿಕ್ರಿಯೆಯಾಗಿ ದಾಖಲಿಸಿ.
1. ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು; ನಮ್ಮ ಎಲ್ಲ ರಾಜಕೀಯ ಪಕ್ಷಗಳನ್ನು ಈ ಗಣಿಗಾರಿಕೆ ಭ್ರಷ್ಟಗೊಳಿಸಿದೆ.
2. ಎಲ್ಲ ಮಕ್ಕಳಿಗೂ ಹತ್ತನೆಯ ಇಯತ್ತೆಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳು (Common school) ಗಳಲ್ಲಿ ಶಿಕ್ಷಣ ದೊರೆಯಬೇಕು. ಮಕ್ಕಳಲ್ಲಿ ಬೇಧವೆಣಿಸಬಾರದು.
3. ನಮ್ಮ ನಗರಗಳು ಬೆಳೆಯುವಾಗ ವೃದರಿಗೂ, ಮಕ್ಕಳಿಗೂ, ಅಂಗವಿಕಲರಿಗೂ ಈ ನಗರಗಳಲ್ಲಿ ಬದುಕುವುದು ಆಹ್ಲಾದಕರವಾಗಿರುವಂತೆ ಬೆಳೆಸಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನಗಳು, ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶಗಳು, ಸೈಕಲ್‌ನಲ್ಲಿ ಓಡಾಡುವವರಿಗೆ ಅವರದೇ ಮಾರ್ಗಗಳು ಇರಬೇಕು.
4. ಬಡಪಾಯಿಗಳಾದರೂ ಆತ್ಮಗೌರವ ಕಳೆದುಕೊಳ್ಳದ ಅಲ್ಪಸಂಖ್ಯಾತ ಜನಸಮುದಾಯದವರಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣವನ್ನು ಕೊಡಬೇಕು; ಅವರಿಗೆ ಮೀಸಲಾತಿ ಇರಬೇಕು.
5. ಈಗಾಗಲೇ ಮೀಸಲಾತಿಯ ಸೌಲಭ್ಯ ಪಡೆದವರ ಮಕ್ಕಳಿಗೆ ಮೀಸಲಾತಿ ಬೇಕಾಗಿಲ್ಲ; ಬದಲಾಗಿ ಆ ವರ್ಗಗಳ ಸಮುದಾಯದಲ್ಲಿ ಈ ವರೆಗೆ ಏನೂ ಸಿಗದವರಿಗೆ ಈ ಮೀಸಲಾತಿಯನ್ನು ನೀಡಬೇಕು
6. ವೋಟುಗಳನ್ನು ಗಿಟ್ಟಿಸಿಕೊಳ್ಳಲು ಕೋಮು, ಜಾತಿ ಮತ್ತು ಭಾಷೆಗಳ ನಡುವೆ ವೈಷಮ್ಯವನ್ನು ಉದ್ದೇಶಪೂರ್ವಕವಾಗಿ ಬೆಳೆಸುವ ಮಾಧ್ಯಮಗಳ ಲಾಭಕೋರತನದ ಹವಣಿಕೆಗಳಿಗೂ ರಾಜಕಾರಣಿಗಳ ಪ್ರಚಾರಗಳಿಗೂ ನಿರ್ಭಂಧಗಳಿರಬೇಕು.
7. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ವಿಶೇಷ ಆರ್ಥಿಕ ವಲಯ (ಎಸ್‌ಇಜಡ್)ಗಳಿಗಾಗಿ ರೈತರಿಂದ ಪಡೆದುಕೊಳ್ಳವುದನ್ನು ನಿಲ್ಲಿಸಬೇಕು.
8. ರೈತರಿಗೆ ತಾವು ಬೆಳೆದದ್ದನ್ನು ಮಾರುವಾಗ ಅವರು ಬೆಳೆದುದಕ್ಕೆ ಯೋಗ್ಯವಾದ ಬೆಲೆ ಸಿಗುವಂತಾಗಬೇಕು.
9. ದೊಡ್ಡ ದೊಡ್ಡ ಮಾಲು (malls)ಗಳ ಬದಲು ಹಲವು ವ್ಯಾಪಾರಿಗಳು ನಡೆಸುವ ಸಣ್ಣ ಪುಟ್ಟ ದೊಡ್ಡ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು
10. ಈ ಭೂಮಂಡಲದ ಶಾಖವನ್ನು ಹೆಚ್ಚುಸುತ್ತ ಎಲ್ಲ ಜೀವಿಗಳಿಗೂ ಮೃತ್ಯುಪ್ರಾಯವಾದ ಅಮೆರಿಕನ್ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲೂ ವ್ಯಕ್ತವಾಗಬೇಕು.
11. ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯತ್ತಿಗೂ, ಜಲ ಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನದ ಲೋಕದಲ್ಲಿ ಆದ್ಯತೆ ಇರುವಂತೆ ನೋಡಿಕೊಳ್ಳಬೇಕು
ಕೊನೆಯದಾಗಿ ಒಂದು ಮಾತು: ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಜನಹಿತ ನಿರ್ಲಕ್ಷಿಸುವ ಜಗತ್ತಿನ ಮಾರುಕಟ್ಟೆಯಲ್ಲಿ ಸಲ್ಲುವಂತಹ ಆರ್ಥಿಕನೀತಿಯನ್ನೇ ಅನುಸರಿಸುತ್ತ ಇವೆ. ಈ ರಾಜಕೀಯ ಪಕ್ಷಗಳ ಸದಸ್ಯರಲ್ಲೇ ಯಾರು ವೈಯಕ್ತಿಕವಾಗಿ ಭ್ರಷ್ಟರಲ್ಲವೋ, ತಮ್ಮ ಪಕ್ಷದ ಒಳಗೇ ಮೇಲಿನ ಕಾರ್ಯಕ್ರಮಗಳಿಗಾಗಿ ಶ್ರಮಿಸಬಲ್ಲರೋ ಅಂಥವರಿಗೆ ಮಾತ್ರ ವೋಟನ್ನು ಕೊಡಬೇಕು
ಜನತಾ ಪ್ರಣಾಳಿಕೆಯ ಕುರಿತಂತೆ ಈಗಾಗಲೇ ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಚರ್ಚೆಗಳು ಬೇರೆ ಬೇರೇ ಕಡೆಗಳಲ್ಲಿಯೂ ನಡೆಯುತ್ತಿವೆ. ಅವುಗಳ ಸಂಪರ್ಕಗಳು ಇಲ್ಲಿವೆ
ಸಿಎನ್ ಎನ್ ಐಬಿಎನ್: Ananthamurthy comes up with a novel poll manifesto
ಚುರುಮುರಿ: A PEOPLE’S MANIFESTO FOR THE 2008 ELECTIONS
ಕೆಂಡಸಂಪಿಗೆ: ಅನಂತಮೂರ್ತಿಯವರ ಹನ್ನೊಂದು ಸೂತ್ರಗಳು



ಶಾಸಕರು ಪ್ರತಿ ೨ ತಿಂಗಳಿಗೊಮ್ಮೆ ತಾವು ಏನೇನು ಅಭಿವ್ರದ್ಧಿ ಕಾರ್ಯಗಳನ್ನು ಮಾಡಿದ್ದೇವೆಂದು ತಮ್ಮ ತಮ್ಮ ಕ್ಶೇತ್ರಗಳಿಗೆ ತೆರಳಿ ಸಭೆಗಳನ್ನು ಮಾಡಿ ಜನರಿಗೆ ವರದಿ ಒಪ್ಪಿಸಬೇಕು ಹಾಗೂ ಜನರಿಂದ ಪ್ರಶ್ನೆಗಳನ್ನು ಸ್ವೀಕರಿಸಿ ಅದಕ್ಕೆ ಉತ್ತರಿಸಬೇಕು.
ನಿಮ್ಮ ಅಭಿಪ್ರಾಯಗಳು ಸದುದ್ಧೇಶದಿಂದ ಕೂಡಿರುವವು ಎನ್ನುವಲ್ಲಿ ನನ್ನಲ್ಲಿ ಅನುಮಾನವಿಲ್ಲ. ಆದರೆ ಕೆಲವು ಪದಗಳ ರಚನೆಯಲ್ಲೇ ಸುಂದರವಾಗಿ ಕಂಡು ಪ್ರಾಯೋಗಿಕವಾಗಿ ನಿರುಪಯೋಗವಾಗುವ ಬಗೆಯೇನೊ ಎನ್ನುವ ಅಳುಕು ನನಗೆ.
೧) ‘ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳು’ ಎಂದರೆ ಏನು?
೨)’ಬಡಪಾಯಿಗಳಾದರೂ ಆತ್ಮ ಗೌರವ ಕಳೆದುಕೊಳ್ಳದ ಅಲ್ಪಸಂಖ್ಯಾತರು’ ಅಂದರೆ ಯಾರು? ಯಾರಾದರೂ ತಾವಾಗಿಯೇ ನಾನು ಆತ್ಮ ಗೌರವವನ್ನು ಕಳೆದುಕೊಂಡವನು ಎಂದು ಪ್ರಕಟಿಸುತ್ತಾರೆಯೇ? ಯಾರನ್ನಾದರೂ ‘ಆತ್ಮ ಗೌರವ ಕಳೆದು ಕೊಂಡವನು ಅಥವಾ ಕಳೆದು ಕೊಳ್ಳದೇ ಇರುವವನು (ಮತ್ತು ಅಲ್ಪಸಂಖ್ಯಾತ)’ ಎಂದು ವ್ಯವಸ್ಥಿತವಾಗಿ ಗುರುತಿಸಲಾಗುತ್ತದೆಯೇ? ‘ಬಡಪಾಯಿಗಳಿಗೆ ಶಿಕ್ಷಣ ಮತ್ತು ಮೀಸಲಾತಿ ಕೊಡಬೇಕು’ ಎಂದಿದ್ದರೆ ಸಾಕಾಗಿತ್ತಲ್ಲವೇ? ಅಲ್ಲಿ ಅವರನ್ನು ಅಲ್ಪಸಂಖ್ಯಾತರು ಬಹುಸಂಖ್ಯಾತರು ಎಂದು ವರ್ಗೀಕರಿಸುವುದರಲ್ಲಿ ಅರ್ಥವೇನಿದೆ?
೩) ‘ಈಗಾಗಲೇ ಮೀಸಲಾತಿ ಪಡೆದವರಿಗೆ ಮೀಸಲಾತಿ ಕೊಡಬೇಕಾಗಿಲ್ಲ’ ಎನ್ನುವ ತಮ್ಮ ಮಾತನ್ನು ನಾನು ಒಪ್ಪುತ್ತೇನೆ.
೪) ಮೀಸಲಾತಿ ನಮ್ಮ ರಾಜಕೀಯಕ್ಕೆ ಎಂತಹ ದಾಳವಾಗಿದೆಯೆಂದರೆ ತಮ್ಮ (೨)ನೇ ಅಂಶವನ್ನು ಜಾರಿಗೆ ತರುವಾಗ ತಮ್ಮ (೬)ನೇ ಅಂಶದ ಉಲ್ಲಂಘನೆ ಖಂಡಿತವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಮೀಸಲಾತಿ, ಜಾತಿ, ಮತಗಳು ವೋಟು ಗಿಟ್ಟಿಸಿಕೊಳ್ಳಲು ದುರುಪಯೋಗವಾಗದೇ ಇರುವಂತೆ ತಡೆಯುವುದು ಹೇಗೆ? ಸೀರೆಗೆ ಪಂಚೆಗೆ ಓಟು ಮಾರಿಕೊಳ್ಳುವ ಬಹುದೊಡ್ಡ ಸಂಖ್ಯೆಯ ಜನರಿಗೆ ‘ಜಾತಿ ಮತಗಳ ಮೇಲೆ ಓಟು ಕೇಳಬೇಡಿ ಕೊಡಬೇಡಿ’ ಎನ್ನುವುದು ಪ್ರಾಥಮಿಕ ಶಾಲೆಯ ಹುಡುಗರಿಗೆ ಕಾಲೇಜಿನ ಪಾಠ ಮಾಡಿದಂತಾದೀತು ಅಲ್ಲವೆ? ಬದಲಾಗಿ, ಅವರಿಗೆ ಇವತ್ತಿನ ಪ್ರಾಥಮಿಕ ಪಾಠ ‘ಓಟಿಗಾಗಿ ಸೀರೆ ಪಂಚೆ ಕೊಡಬೇಡಿ ತೆಗೆದುಕೊಳ್ಳಬೇಡಿ’ ಎಂದು ಹೇಳುವುದು ಇವತ್ತಿಗೆ ಸಮಂಜಸವಲ್ಲವೇ? ಅವರು ಅದನ್ನು ಪಾಸಾದ ನಂತರ ಒಕ್ಕಲಿಗರೆಂಬ ಕಾರಣಕ್ಕೇ ಒಕ್ಕಲಿಗ ಅಭ್ಯರ್ಥಿಗೆ ಮತ ನೀಡಬೇಡಿ ಬದಲಾಗಿ ಯೋಗ್ಯತೆಯನ್ನು ನೋಡಿ ಎಂದು ಹೇಳಬಹುದು.
೫) ದೊಡ್ಡ ದೊಡ್ಡ ಮಾಲುಗಳು ಜಾಗತೀಕರಣದ ಪರಿಣಾಮವಾಗಿ ಬರುತ್ತಿವೆ. ಕಿರಣಿಅಂಗಡಿಗಳನ್ನು ಕಳೆದುಕೊಳ್ಳುತ್ತಿರುವುದು ಜಾಗತೀಕರಣದ ಸಾವಿರ ಪರಿಣಾಮಗಳಲ್ಲಿ ಒಂದು. ಜಾಗತೀಕರಣವನ್ನು ಮತ್ತು ಅದು ಹುಟ್ಟುಹಾಕುತ್ತಿರುವ ಇವತ್ತಿನ ಹೊಸ ಬಗೆಯ ವಾಣಿಜ್ಯ ವಸಹಾತುಶಾಹಿಯನ್ನು ನಾವು ಎದುರಿಸುವ ಬಗೆಯ ಬಗ್ಗೆ ತಾವು ಬರೆದಿದ್ದರೆ ಬಹಳ ಪ್ರಸ್ತುತವಾಗುತ್ತಿತ್ತೇನೊ.
ನಮಸ್ಕಾರಗಳು,
ದತ್ತಾತ್ರಿ
ಅದಿರನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಬೇಕು. ಬ್ರಿಟೀಶ್ ಕಾಲದ ಕಾನೂನನ್ನು ಬದಲಿಸಬೇಕು. ಅಗತ್ಯವಿರುವಷ್ಟು ಮಾತ್ರ ಅದಿರನ್ನು ತೆಗೆದು, ಸಂಸ್ಕರಿಸಿ ದೇಶೀಯ ಅಭಿವೃದ್ಧಿಗಾಗಿ ಬಳಸಬೇಕು. ಗಣಿ ಲಾಬಿಯಿಂದಾಗಿ ರಾಜ್ಯ ಭ್ರಷ್ಟತೆಯ ಪರಾಕಾಷ್ಟೆ ಮುಟ್ಟಿದೆ. ಆದರೆ, ಕಾನೂನು ಮಾಡುವವರು ತಮ್ಮ ಹಿತದೃಷ್ಟಿ ಬಿಟ್ಟು ದೇಶದ ಹಿತ ಕಾಯುವರೇ ಎಂಬುದು ಅನುಮಾನ.
ನಮ್ಮನ್ನು ಕ್ರಿಯಾಶೀಲಗೊಳಿಸುತ್ತಿರುವ ಅನಂತಮೂರ್ತಿ ಅವರಿಗೆ ಧನ್ಯವಾದಗಳು. ನಿಮ್ಮ ಚಿಂತನೆಗಳು ಸಮರ್ಪಕವಾಗಿವೆ. ಇವುಗಳ ಜೊತೆಗೆ "ನೀರಿನ" ವಿಚಾರ ಸೇರಬೇಕು ಅನ್ನಿಸುತ್ತದೆ. ಇನ್ನೈದು ವರ್ಷಗಳಲ್ಲಿ ಬೆಂಗಳೂರು ಕುಡಿಯುವ ನೀರಿನ ಹಾಹಾಕಾರವನ್ನು ಎದುರಿಸುತ್ತದೆ. ಸಾಮಾನ್ಯ ಎಲ್ಲಾ ಪಟ್ಟಣಗಳೂ ಕೂಡ ಇದನ್ನೇ ಕಾಣುತ್ತವೆ. ಇದಕ್ಕೆ ಪರಿಹಾರವಾಗಿ ಸರ್ಕಾರಗಳು ಕೋಟಿ ಕೋಟಿ ಹಣದ ಯೋಜನೆ ರೂಪಿಸಿ ..ಇನ್ನೊಂದೆಡೆಯಿಂದ ಕಿತ್ತು ಕೊಡಲು ಪ್ರಯತ್ನಿಸುತ್ತದೆ. ಇವೆಲ್ಲ ಪಕ್ಕದ ರಾಜ್ಯಗಳೋಂದಿಗಿನ ಕಾಳಗಕ್ಕೂ ಕಾರಣವಾಗುತ್ತದೆ. ಆದ್ದರಿಂದ ಪ್ರತೀ ಮನೆಯೂ ಖಡ್ಡಾಯವಾಗಿ ಮಳೆನೀರನ್ನು ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಹೊಂದಬೇಕು. ಅದಕ್ಕೆ ಆರ್ಥಿಕ ಅನುಕೂಲವನ್ನು ಸರ್ಕಾರ ಮಾಡಬೇಕು.
ಕೆ.ಜಿ. ಶ್ರೀಧರ್
ತೀರ್ಥಹಳ್ಳಿ
kgsdhar@gmail.com
Dear Dr. Ananthamurthy,
Thank you for that kind note of appreciation. I also went through your suggestions for the Elections that appeared in the kendasampige column.I have always been appreciating your ideas and views. The note about the survival of the farm lands is the fact that has been worrying me too in the recent times. Have you been to Mangalore recently? The farms in the centre of the city, the Kodiala Gutthu area where I enjoyed my infant days. disappeared long back. I used to dip my school bag in the water at the breaks of the kattehuni to catch the tiny fish swimming along and get punished when I was in the Baby class. The stretch from Mangalore city to Someshwar Uchil was just a feast to the eyes with green every where,and the beautiful river Netravathi dancing along in between. The swaying paddy fields, lush green sugarcane fields waving their Manmatha ratha and the fragrance from the Alemane were all so captivating. Sugarcane fields disappeared ten years ago. Te rice fields too started disappearing gradually and the process was complete two years ago with not a single field left for the human eye.Now all those farm lands are being laiden with mud and rubbish to house garages petrol bunks and small industries. Sand quarying from the river Nethravathi is going on spoiling the beauty of nature over there. Whenever I passed that way , I used to fix my eyes on that beautiful nature and please myself to my hearts content. But now, looking out from the vehicle is simply hurting.
City of Mangalore has progressed like anything[!] with skyscrapers undoing the old beautiful mansions. Can we ever getback what we have lost?
Shyamala
One of the important aspects in the draft manifesto (point 2) is the demand for Common. School System (CSS). It is an important issue because unless we have CSS on the lines of neighbourhood school it is not possible to think of a society based on equality and egalitarianism. This is the first step towards Social Justice as one fundamental principles of our Constitution. Being a Child Rights Activist I fully support this demand and we must urge our political parties to include this in their manifesto as the top priority and to plan strategies later to implement the CSS in phased manner by empowering all government schools in the neighbourhood as the genuine neghbourhood schools.
Dr.Niranjanaradhya.V.P
Senior Research Officer-School Education
Centre for Child and the Law
National Law School of India University
Nagarbhavi,Bangalore -560242
ಎಲ್ಲ ಚುನಾಯಿತ ಜನಪ್ರತಿನಿಧಿಗಳು, ಯಾವುದೆ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಸಭೆ ಸಮರಂಭಗಳಿಂದ ದೂರವಿರತಕ್ಕದ್ದು.
೧. ನಗರ ಮತ್ತು ಪಟ್ಟಣಪ್ರದೇಶಗಳಲ್ಲಿ ಖಾಸಗಿ ವಾಹನಗಳ ಮೇಲೆ ಮುಖ ಬೆಲೆಯ ಮೇಲೆ ೩೦% ರಸ್ತೆ ತೆರಿಗೆ ಮತ್ತು ೧೦% ನಿಲುಗಡೆ ತೆರಿಗೆ ವಿಧಿಸುವುದು. ಇದರಿಂದಾಗಿ, ಪೆಟ್ರೋಲ್, ಡೀಸಲ್ ಊಪಯೋಗ, ಭೂತಾಪ ಹಾಗು ಮಾಲಿನ್ಯ ನಿಯಂತ್ರಣ ಸಾಧ್ಯವಾಗಬಹುದು. ಜೊತೆಗೆ ಸಾಮಾಜಿಕ ಅಸಮತೋಲನಕ್ಕೆ ಅನುವು ಮಾಡಿಕೊಡುತ್ತಿರುವ ನಗರಗಳ ವೆಹಿಕ್ಯುಲರ್ ಇಕಾನಮಿಯನ್ನು ನಿಯಂತ್ರಿಸಿದಲ್ಲಿ, ಹಳ್ಳಿಗಳನ್ನು ಬರಿದುಮಾಡುತ್ತಿರುವ ಯುವಜನ ವಲಸೆಯನ್ನು ತಡೆಗಟ್ಟಬಹುದೇನೊ.
೨. ಪ್ರತಿ ಚುನಾಯಿತ ಮತ್ತು ಅಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಪ್ರತಿ ವರ್ಷವೂ ತಮ್ಮ ಕೆಲಸಗಳ ಬಗ್ಗೆ ವರದಿ ಸಲ್ಲಿಸಬೇಕು. ಮುಂದಿನ ಚುನಾವಣೆಗೆ ನಿಲ್ಲುವ ಅರ್ಹತೆ ಈ ವರದಿಯ ಇವಾಲ್ಯುಯೇಶನಿನ ಮೇಲೆ ನಿರ್ಧರಿತವಾಗಬೇಕು. ಮೌಲ್ಯ ಮಾಪನವನ್ನು ಮಾಡಲು, ಭ್ರಷ್ಟಾಚಾರಕ್ಕೆ ಎಡೆಯೇ ಇಲ್ಲದ ಒಂದು ಸಾರ್ವಜನಿಕ ಹಿತಾಸಕ್ತಿ ಸಮಿತಿಯನ್ನು ಪ್ರತಿ ಕ್ಷೇತ್ರದಲ್ಲಿ ನಿರ್ಮಿಸಿ ಯೋಗ್ಯ ಅಧಿಕಾರ ರಹಿತ ಮಾಪಕರನ್ನು ರಚಿಸಬೇಕು.
೩. ಪ್ರತೀ ರಾಜಕೀಯ ಪಕ್ಷವೂ ತಮ್ಮ ಕಾರ್ಡ್ ಹೋಲ್ಡಿಂಗ್ ಮೆಂಬರ್ ಶಿಪ್ ಸಂಖ್ಹ್ಯೆಗೆ ಅನುಗುನವಾಗಿ ತಮಾಷೆಯಲ್ಲದ ಮೊತ್ತವನ್ನು ಪ್ರತಿ ವರ್ಷವೂ ತೆರಲು ಅಮೆಂಡ್ಮೆಂಟ್ ಆಗಬೇಕು. ಚುನಾವಣೆಯ ಪ್ರಕ್ರಿಯೆಯ ಸಕಲ ಖರ್ಚುಗಳೂ ಈ ಹಣದಿಂದಲೇ ಆಗಬೇಕು. ಜನಸಾಮಾನ್ಯರ ತೆರಿಗೆ ಹಣವನ್ನು ಜನಸಾಮಾನ್ಯರ ಅಗತ್ಯತೆಗಳನ್ನು ಪೂರೈಸುವುದಕ್ಕೆ ಮಾತ್ರ ಖರ್ಚು ಮಾಡಬೇಕು.
೪. ತಂತ್ರಜ್ನಾನದ ಮೂಲಕ ನವ ಬ್ರ್ರಾಹ್ಮಣಶಾಹಿಯನ್ನು ಸ್ಥಾಪಿಸಿ ವ್ಯಾಪಕ ಸಾಮಾಜಿಕ ಹಾಗು ಸಾಂಸ್ಕೃತಿಕ ಅಸಮತೋಲನಕ್ಕೆ ಕಾರಣವಾಗಿರುವ ಎಗ್ಗು ಎಣೆ ಇಲ್ಲದ ಅನಿರ್ಬಂಧಿತ ತಾಂತ್ರಿಕತೆಯನ್ನು ರೆಗ್ಯುಲೇಟ್ ಮಾಡಬೇಕು.
೫. ದೇಶದ ರಕ್ಷಣೆಯ ಹೆಸರಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆಯೂ ಲಕ್ಷಾಂತರ ಕೋಟಿ ರೂಪಾಯಿ ರಕ್ಷಣಾ ಬಜೆಟ್ ತೆಗೆದಿಡುವ ವ್ಯವಸ್ಠೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು.
ಸಾಮಾನ್ಯ ಶಾಲೆಗಳ ವಿಷಯವಾಗಿ ತಾವು ಪದೆ ಪದೆ ಮಾತನಾಡುವುದಅಕ್ಕೆ ಧನ್ಯವಾದಗಳು.
ಬರಿ ಶಾಲೆಗಳು ಸಾಮನ್ಯ ವಾದರೆ ಸಾಲದು. ಮುಖ್ಯವಾಗಿ ಕಲಿಯುವ ಮಾಧ್ಯಮ ಸಾಮನ್ಯ ವಾಗಬೇಕು. ಮತ್ತು ಸೊಲ್ಪ ಮಟ್ಟಕ್ಕೆ ಕಲಿಯುವ ವಿಷಯ ಸಾಮನ್ಯ ವಾಗಬೇಕು.
ಮುಖ್ಯವಾಗಿ ಸಮಾಜ, ಸಿವಿಕ್ಸ್ ಹಾಗು ಕನ್ನಡದಲ್ಲಿ science, maths and english in english ಆಗಬೇಕು. ಹೀಗೆ ಮಾಡಿ, ತುಳು, ಕೊಂಕಣಿ, ತೆಲುಗು, ತಮಿಳು, ಹಿಂದಿ, ಮರಾಠಿ third language ಆದರೆ ಯಾರಿಗು ನಷ್ಟ ಇಲ್ಲ.
Post new comment