ಉದಯವಾಣಿ ಅಂಕಣ

Some Reflections on Gautam's Observations on Prof. Ananthamurthy's Manifesto

Jyotsna Jha

We should also remember that the same history tells us that any change with significant impact on human lives have happened because someone or a group of people dared to dream. To consider only easily 'achievable' as 'practical' and think that 'ordinary' people want only 'practical' reflects a myopic understanding of 'ordinary' people's lives and aspirations.

It is important to understand that what we today refer to as the 'rule of law' and 'social justice' did not come into being naturally - it has been a dynamic process where the very concept of 'law' has changed with changing notions of justice and the process is continuous - it has not stopped and will not stop. And even at the same point of time, different notions exist not only in different societies but also in the same society. Therefore, though it remains unclear and debatable whether more people live better lives today or not, what is certain is that the technological fix alone cannot solve human problems in the absence of a framework firmly rooted in the philosophy of equality and committed to what we understand today by 'justice'. The best example is green revolution itself. Despite high increase in the yield as well as total food production, thousands in India die of hunger, and millions suffer from malnutrition. And these figures are large not only in numbers but also in proportion. The latest data suggest that more than half of Indian children suffer from malnutrition, clearly indicating that it is neither an aberration nor a localised issue. One can go on citing many such examples to point out that technological fixes alone can never solve human issues.  read more »

ಆತ್ಮದ ಸಂಜ್ಞೆಗಳನ್ನು ಗ್ರಹಿಸಿದಾತ

ರಾಮಚಂದ್ರ ಗಾಂಧಿ: 1937-2007

ರಾಮಚಂದ್ರ ಗಾಂಧಿ
Photo: Tribune India

ನಾನು ರಾಮಚಂದ್ರ ಗಾಂಧಿಯವರನ್ನು (ನನಗವರು ರಾಮೂ ಗಾಂಧಿ) ಮೊದಲು ನೋಡಿದ್ದು ಆಕ್ಸ್‌ಫರ್ಡ್‌ನ ಒಂದು ರೆಸ್ಟೋರೆಂಟ್‌ನಲ್ಲಿ. ಅವರಿಗಾಗ ಇಪ್ಪತ್ತಾರೋ ಇಪ್ಪತ್ತೇಳೋ ವರ್ಷ. ದೂರದಿಂದ ಅವರನ್ನು ಕಂಡಿದ್ದೆ. ನನ್ನ ಗೆಳೆಯ `ಇವರೇ ರಾಮಚಂದ್ರ ಗಾಂದಿ' ಎಂದಾಗ ಮಹಾತ್ಮಾ ಗಾಂಧಿಯವರಿಗಿದ್ದ ಕಿವಿಗಳೇನಾದರೂ ಕಾಣಿಸಬಹುದೇ ಎಂದು ಕುತೂಹಲದಿಂದ ನಾನು ಅವರನ್ನು ದುರುಗುಟ್ಟಿ ನೋಡಿದ್ದೆ. ನನ್ನ ಪುಟ್ಟ ಮಗನಿಗೂ ಅವರನ್ನು ತೋರಿಸಿದ್ದೆ. ಇದನ್ನು ಬಹಳ ವರ್ಷಗಳಾದ ನಂತರ ಅವರಿಗೆ ನೆನಪು ಮಾಡಿಕೊಟ್ಟಾಗ ಆ ದಿನಗಳಲ್ಲಿ ತಾನು ಯೋಚಿಸುತ್ತಿದ್ದ ಕ್ರಮಕ್ಕೂ ಈಗಿನ ಕ್ರಮಕ್ಕೂ ಆಗಿರುವ ಅಗಾಧವಾದ ವ್ಯತ್ಯಾಸವನ್ನು ಕುರಿತು ಮಾತನಾಡಿದ್ದರು. ಅವರ ಮೊದಲ ಪುಸ್ತಕ ಆ ಆಕ್ಸ್‌ಫರ್ಡ್ ಕಾಲದಲ್ಲಿಯೇ ಪ್ರಕಟವಾಗಿತ್ತು. ಅದು ಪಾಶ್ಚಾತ್ಯ ಚಿಂತನೆಯಲ್ಲೇ ಹುಟ್ಟಿ ಅವರನ್ನು ಪ್ರಸಿದ್ಧರನ್ನಾಗಿ ಮಾಡಿದ ಕೃತಿಯಾಗಿತ್ತು. ಆದರೆ ರಾಮಚಂದ್ರ ಗಾಂಧಿ ಅದನ್ನು ನಿರಾಕರಿಸಿ ಬದಲಾದರು. ಅಪ್ಪಟ ಭಾರತೀಯ ಕ್ರಾಂತದರ್ಶಿಯಾದರು. ನೆಹರೂ ಸೆಂಟರ್‌ನಲ್ಲಿ ಒಮ್ಮೆ ಪ್ರಸಿದ್ಧ ಐರೋಪ್ಯ ತತ್ವಜ್ಞಾನಿ ಈ ಕಾಲದ ಬಗ್ಗೆ ಮಾತಾಡಿದ ನಂತರ ಎಲ್ಲರೂ ಬೆರಗಾಗಿ ಕೂತಿದ್ದಾಗ, ಅಲ್ಲಿದ್ದ ರಾಮೂ ಗಾಂಧಿ ರಮಣರು ಮುಟ್ಟಿದ ಪ್ರಜ್ಞಾಸ್ಥಿತಿಯೂ ಈ ನಮ್ಮ ಕಾಲವನ್ನು ಅರಿಯಲು ಮುಖ್ಯವಲ್ಲವೆ? ಎಂದು ಪಾಶ್ಚಾತ್ಯ ಜ್ಞಾನಕ್ಕೆ ಬೆರಗಾದವರು ಋಯೊಬ್ಬನನ್ನು ಆ ಸಭೆಗೆ ಬರಮಾಡಿಕೊಳ್ಳಲೇಬೇಕಾಗಿ ಬಂದು ಮುಜುಗರ ಪಡುವಂತೆ ಮಾಡಿದ್ದರು.  read more »

TEJASVI, a Profound Writer in a Comic Mode

Beerendranath Bhattacharya, a well-known Assamese writer met when he was President of the Sahitya Akademi, Gopalakrishna Adiga and asked him to name for an outsider like him the greatest creations of Kuvempu. Adiga was at that time known as a critic of Kuvempu’s grand style in poetry and from that criticism the ‘Navya’ literary movement had drawn ideas for a new language and idiom in Kannada poetry. I was also a strong defender of Adiga’s literary position, although, now looking back, I am aware of its creative strength and, at the same time, its intellectual and aesthetic short-comings.

Adiga was an outspoken writer and critic and his response to Bhattacharya adds a new meaning and a metaphorical dimension to what I just now have written. Adiga named the two great novels of Kuvempu, Kanooru Heggdathi and Malegalalli Madumagalu and was silent for a while making Bhattacharya guess what would be the third wok. Kuvempu’s Ramayana Darshana? No. Adiga replied: ‘the third great creation is his son, Purna Chandra Tejasvi.’  read more »

ಕಾವೇರಿಗೆ ಬೇಕೆ ಅಗಸ್ತ್ಯ ನ್ಯಾಯ

ಕೊಡವರ ಸಾಂಸ್ಕೃತಿಕ ನಿಧಿಯಾದ `ಪಟ್ಟೋಲೆ ಪಳಮೆ' ಈಗ ಇಂಗ್ಲಿಷ್‌ಗೆ ಭಾಷಾಂತರಗೊಂಡಿದೆ. ಇದನ್ನು ಮೊದಲು ಸಂಗ್ರಹಿಸಿ ದವರು ನಾಡಿಕೇರಿಯಂಡ ಚಿಣ್ಣಪ್ಪ (1924). ಭಾಷಾಂತರಿಸಿದವರು, ಅವರ ಮೊಮ್ಮಕ್ಕಳಾದ ಬೋವೇರಿಯಂಡ ನಂಜಮ್ಮ ಮತ್ತು ಚಿಣ್ಣಪ್ಪ. ಭಾಷಾಂತರಕ್ಕೆ ಬರೆದ ಮುನ್ನುಡಿಯಲ್ಲಿ ಇವರು ಈ ಕಾಲದ ಕೊಡವ ಯುವಕರಿಗೆ ಕನ್ನಡ ಲಿಪಿಯೇ ಗೊತ್ತಿಲ್ಲದೇ ಇರಬಹುದು, ಅವರಿಗಾಗಿ ಈ ಅನುವಾದವನ್ನು ತಾವು ಮಾಡಿದ್ದೇವೆ ಎಂದಿದ್ದಾರೆ. ಈ ಗ್ರಂಥದಲ್ಲಿ ನಮಗೆ ಕಾವೇರಿ ಪುರಾಣ ಸಿಗುತ್ತದೆ. ಈ ಪುರಾಣದಲ್ಲಿ ನನಗೆ ಅತ್ಯಂತ ಆಕರ್ಷಕ ಎನಿಸಿದ ಕಥೆ ಇದು:  read more »

ಸುಬ್ಬಣ್ಣ ಎಂಬ ಭಾರತೀಯ ಮನಸ್ಸು

ನಾನು ಮತ್ತು ಕೆ.ವಿ.ಸುಬ್ಬಣ್ಣ ಐವತ್ತು ವರ್ಷ ಜತೆಯಲ್ಲಿದ್ದೆವು. ನನ್ನ ಮಟ್ಟಿಗೆ ಸುಬ್ಬಣ್ಣನ ಮನಸ್ಸು ಹೇಗೆ ಕೆಲಸ ಮಾಡುತ್ತಿತ್ತು ಎಂಬುದು ಬಹಳ ಮುಖ್ಯ. ಅವನು ಇರುವಷ್ಟು ಕಾಲ ನಾವಿಬ್ಬರೂ ವಾರಕ್ಕೆ ಒಂದು ಸಾರಿಯಾದರೂ ಟೆಲಿಫೋನ್‌ನಲ್ಲಿ ವಾಗ್ವಾದ ನಡೆಸುತ್ತಿದ್ದವು. ಎಲ್ಲರಿಗೂ ಅಲ್ಲಮನ ಬಗ್ಗೆ ಬಹಳ ಹುರುಪಿದ್ದಾಗ-ಈ ಹುರುಪು ಬಂದಿದ್ದು ದಿವಂಗತ ಡಿ.ಆರ್‌.ನಾಗರಾಜನಿಂದ- ಒಂದು ದಿನ ನಾಗರಾಜ್‌ ಅಲ್ಲಮನ ಬಗ್ಗೆ ಮಾತನಾಡಿದರು. ಇದು ಸುಬ್ಬಣ್ಣನಿಗೂ ಇಷ್ಟವಾಯಿತು. ಆದರೆ ಸುಬ್ಬಣ್ಣ ನನಗೆ ಹೇಳಿದ್ದು ಹೀಗೆ: `ಅಲ್ಲಮ ಮತ್ತು ಕಾಳಿದಾಸನಲ್ಲಿ ನಾನು ಆಯ್ಕೆ ಮಾಡುವುದು ಕಾಳಿದಾಸನನ್ನು'.  read more »

ಅಡಿಗರು ಕಾಣಿಸುತ್ತಲೇ ಇರುವ 'ಇಂದು ನಮ್ಮೀ ನಾಡು'

ಬದುಕಿದ್ದರೆ ಅಡಿಗರಿಗೆ ಇಂದಿಗೆ ತೊಂಬತ್ತು ವರ್ಷವಾಗಿರುತ್ತ ಇತ್ತು. ಯಾವತ್ತೋ ಅವರು ಬರೆದ `ಇಂದು ನಮ್ಮೀ ನಾಡು' ಎನ್ನುವ ಮೂರು ಪದ್ಯಗಳು ಇವೆ. ಆ ಮೂರು ಪದ್ಯಗಳೂ ಇವತ್ತಿಗೂ ಪ್ರಸ್ತುತವೆಂದರೆ ಅವರ ಕಾವ್ಯದ ಹಿರಿಮೆಯನ್ನು ಹೇಳಿದಂತಾಗಬಾರದು; ಬದಲಾಗಿ, ಆ ಪದ್ಯಗಳು ಪ್ರಸ್ತುತವಾಗುವಂತೆ ನಾವಿನ್ನೂ ಬದುಕುತ್ತ ಇದ್ದೀವಿ ಅಲ್ಲವೆ ಎಂದು ನಾಚಿಕೆಯಾಗಬೇಕು.  read more »

ಟಾಯ್ನ್‌ಬಿ ಚಿಂತನೆ: ಸವಾಲು-ಜವಾಬು

ಅಡಿಗರ ಪ್ರೇರಣೆಯಿಂದಾಗಿ, ಜೊತೆಗೆ ಲೋಹಿಯಾರಿಂದಾಗಿ ನಾನು ಓದಲುತೊಡಗಿದ ಇತಿಹಾಸಕಾರ ಆರ್ನಾಲ್ಡ್‌ ಜೆ ಟಾಯ್ನ್‌ಬಿ ಕೂಡಾ ಆರ್ಟೆಗಾ ಗ್ಯಾಸೆಯಂತೆಯೇ ನನ್ನ ಬರೆವಣಿಗೆಯ ಮೇಲೆ ಪರಿಣಾಮವನ್ನು ಬೀರಿದವನು. (A study of History 1961)ನಾನೇನೂ ಟಾಯ್ನ್‌ಬಿಯನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳುತ್ತಿಲ್ಲ. ಬರೆಹಗಾರನಾದವನೊಬ್ಬ ಅಪಾರ್ಥ ಮಾಡಿಕೊಂಡಾಗಲೂ ಇರುವ ವಿಚಾರ ನಮಗೆ ಅಗತ್ಯವಾದ ಇನ್ನೇನೋ ಆಗಿ ರೂಪಾಂತರಗೊಂಡು ಇನ್ನೊಂದು ಆಯಾಮವನ್ನೇ ಪಡೆದು ಉಪಯುಕ್ತವಾಗುವುದು ಇದೆ.  read more »

Syndicate content