ಪ್ರತಿಕ್ರಿಯೆ

Some Observations on People's Manifesto

Anil Sadgopal

1. This pro-people and boldly drafted manifesto deserves wide-rangin support in Karnataka and needs to be debated all over the country in preparation of the next General Elections.

2. Agenda Item No. 1: Putting a stop to mining (of not just iron, but all other ores as well) for exports will necessitate a complete review of the huge mining contracts signed with multi-national corporations during the recent decades under terms and conditions that amount to a total sell-out of India's rich natural resources to foreign capital.

3. Agenda Item No. 2: The long-pending demand for Common School System will be seen by the masses as a major political agenda if it shall,  read more »

Don't deny reservation to all second gen beneficiaries

Dr. Jyotsna Jha

1. Reservations for dalits, adivasis and other backward castes in educational institutions has been an important policy to implement the affirmative action that our Constitution guarantees. Despite limitations and problems, the policy has succeeded in enhancing the educational status of these social groups, and their representation in public sector jobs, which in turn has meant both social and economic mobility for them. Considering that these groups are still far from being close to other groups either in education or in employment status, it is important that the policy continues. Also, in view of the relatively lower status of Muslims as compared to other religious or social groups, it is desirable to extend this action to them.  read more »

ಭಾಷಣ, ಮಾಧ್ಯಮಗಳು ಮತ್ತು ತಮ್ಮ ಲೇಖನ

"ಭೈರಪ್ಪನವರ "ಆವರಣ"ದ ಬಗ್ಗೆ ಮಾಡಿದ ಭಾಷಣದ ಸಾರ" ಲೇಖನಕ್ಕೆ ಜೀವಿಶಿವು ಅವರ ಪ್ರತಿಕ್ರಿಯೆ

ನಾನು ಈಗಾಗಲೇ ಹೇಳಿರುವಂತೆ, ಪತ್ರಿಕೆಗಳು ತಮ್ಮ ಭಾಷಣವನ್ನು ಸಾಕಷ್ಟು ತಪ್ಪಾಗಿ ಧ್ವನಿಸಿವೆ. ಪ್ರಜಾವಾಣಿ ಪರವಾಗಿಲ್ಲ ಎನ್ನುವ ರೀತಿ ಪ್ರಕಟಿಸಿದ್ದರೆ, ವಿಜಯಕಾರ್ನಾಟಕದ ಅಪಾಯಕಾರೀ ಧೋರಣೆ ಮೇಲ್ನೋಟಕ್ಕೇ ಗೊತ್ತಾಗುತ್ತದೆ. ನಿಮ್ಮ ಭಾಷಣವನ್ನು ಕೇಳಿ ನನಗೆ ಅದೆಷ್ಟೋ ನೆಮ್ಮದಿಯಾದರೂ, ನನ್ನೀ ಬರಹ ನನ್ನ ಭಿನ್ನಾಭಿಪ್ರಾಯ ಮತ್ತು ವಿಷಾದಗಳನ್ನೇ ಹೆಚ್ಚು ಅರುಹುತ್ತಿವೆ.  read more »

ವಾಸ್ತವದ ಋಜುತ್ವ ಕಾಣುವ ಒಂದು ರೂಪಕ

ಈ ಲೇಖನದಲ್ಲಿ ಫಣಿರಾಜ್ ಅವರು ದಕ್ಷಿಣ ಏಷ್ಯಾದ ಸಂಬಂಧಗಳನ್ನು ಕೇಂದ್ರವಾಗಿಟ್ಟು ಅನಂತಮೂರ್ತಿಯವರು ಬರೆದ ಲೇಖನಗಳಿಗೆ ಪ್ರತಿಕ್ರಿಯಿಸಿದ್ದಾರೆ

ಳೆದ ನಾಲ್ಕು ವಾರಗಳ `ಋಜುವಾತು' ಅಂಕಣದಲ್ಲಿ ಅನಂತಮೂರ್ತಿ ಯವರು ಕಥನಾಶೈಲಿಯಲ್ಲಿ ತಮ್ಮ ವಿಚಾರಗಳನ್ನು ನಿರೂಪಿಸುತ್ತಿದ್ದಾರೆ. ಕಥನಾಶೈಲಿಯ ನಿರೂಪಣೆ ಆಪ್ತವಾಗಿರುತ್ತದೆ, ಕತೆಗಾಗಿಯೇ ಓದುವ ಕುತೂಹಲವನ್ನು ಓದುವವರಲ್ಲಿ (ಕೇಳುವವರಲ್ಲಿ) ಮೂಡಿಸುತ್ತದೆ. ಅನಂತಮೂರ್ತಿಯವರ ಬರಹದಲ್ಲಿ ಈ ಗುಣಗಳಂತೂ ಇದ್ದೇ ಇವೆ- ಅನಂತಮೂರ್ತಿ ನಮ್ಮ ಅಗ್ರಪಂಕ್ತಿಯ ಕತೆಗಾರರಾಗಿರುವುದರಿಂದ ಇದು ವಿಶೇಷವಲ್ಲ. ಆದರೆ ವೈಚಾರಿಕ ನಿಲುವುಗಳನ್ನು ಕಥನಾಶೈಲಿಯಲ್ಲಿ ನಿರೂಪಿಸುವಾಗ, ಅದರಲ್ಲೂ ಸ್ವಾನುಭವದ ಕಥನವಾಗಿ ನಿರೂಪಿಸುವಾಗ, ಕೆಲವು ಅಪಾಯಗಳು ಇರುತ್ತವೆ.

ಸಿದ್ಧವಾದ ಸೈದ್ಧಾಂತಿಕ ದೃಷ್ಟಿಕೋನದಿಂದ ವಿಚಾರಗಳನ್ನು ಪ್ರಕಟಿಸುವಾಗ ಕಣ್ಣೋಟ ಕಿರಿದಾಗುವ ಹಾಗೆಯೇ ಉದ್ದೇಶಿತ ನಿಲುವನ್ನು ಕಥಾಮಾರ್ಗದಲ್ಲಿ ನಿರೂಪಿಸುವಾಗಲೂ ಆಗುತ್ತದೆ. ಇಲ್ಲಿ, ನಿರೂಪಕನ ವಿಚಾರಗಳ ಸಾಚಾತನವನ್ನು ಸಾಬೀತು ಮಾಡುವುದು ಮಾತ್ರ ಕತೆಯ ಕೆಲಸ. ಇದು ಒಂದು ಬಗೆಯ ಅಪಾಯ. ಮತ್ತೊಂದು ಇದಕ್ಕೆ ತದ್ವಿರುದ್ಧವಾದದ್ದು: ನಿರೂಪಕ, ತನ್ನ ಕತೆಯ ಮೋಹದಲ್ಲಿ ತಾನೇ ಸಿಲುಕಿ, ಕತೆ ಹೇಳುವುದೇ ಒಂದು ವಿಲಾಸವಾಗಿ, ಕೊನೆಗೆ ತಾನು ಹೇಳಹೊರಟ ವಿಚಾರದ ಸ್ಪಷ್ಟತೆಯನ್ನೇ ಕಳೆದುಕೊಂಡುಬಿಡುವುದು. ಹಾಗಿದ್ದರೆ ಯಾವ ಸುಖಕ್ಕಾಗಿ ಕಥನಾ ಮಾರ್ಗ ಹಿಡಿಯಬೇಕು?  read more »

ಅಪ್ವರ್ಡ್ ಲೇಖನಮಾಲೆಗೊಂದು ಪ್ರತಿಕ್ರಿಯೆ

ಹಿರಿಯರಾದ ಡಾ|| ಅನಂತಮೂರ್ತಿಗಳಿಗೆ ನಮಸ್ಕಾರಗಳು,

ನಾನು ಇತಿಹಾಸದ ವಿದ್ಯಾರ್ಥಿಯಲ್ಲ. ಹಾಗಾಗುವ ಅವಕಾಶ ಕೈಬಿಟ್ಟವನು. ಆದರೆ ಆಸಕ್ತಿ ಕಡಿಮೆಯಾಗದವನು, ಆ ಹಸಿವನ್ನು ನೀಗಿಕೊಳ್ಳಲು ಪ್ರಯತ್ನಿಸುತ್ತಿರುವವನು. ಹಾಗಾಗಿ ಎಡಪಂಥೀಯ ವಿಚಾರಧಾರೆ, ಕಮ್ಯುನಿಸಂ ಮತ್ತು ಕಮ್ಯುನಿಸ್ಟರ ಕುರಿತಾದ ಲೇಖನಗಳನ್ನು, ಬಿಡಿ-ಬಿಡಿಯಾಗಿ ಓದಿಕೊಂಡವನು. ಅಖಂಡವಾದ ಓದು ಸಾಧ್ಯವಾಗಿಲ್ಲ. ಆದ್ದರಿಂದಲೇ, ತಮ್ಮ ಲೇಖನಮಾಲೆಗೆ ನನ್ನ ಪ್ರತಿಕ್ರಿಯೆಯನ್ನು - ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳ ಮೂಲಕ ಲೇಖನಮಾಲೆಯನ್ನು ಗ್ರಹಿಸಲು ಪ್ರಯತ್ನಿಸುತ್ತಾ - ರೂಪಿಸಿಕೊಂಡಿದ್ದೇನೆ. ಅಲ್ಲದೇ, ತಮ್ಮ ಇತರ ಪ್ರಬಂಧಗಳು ಈ ಚಿಂತನೆಗಳಿಗೆ ಪೂರಕವೆನ್ನಿಸಿದ್ದರಿಂದ, ಆ ಪ್ರಬಂಧಗಳಲ್ಲಿನ ತಮ್ಮದೇ ಆದ ಕೆಲ ಪರಿಕಲ್ಪನೆಗಳ ಮೂಲಕವೂ (ಆಧ್ಯಾತ್ಮಿಕ ಹಸಿವು, ಸಮಾನತೆಯ ಹಸಿವು) ಇದನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ತಮ್ಮ ಲೇಖನದ ಅನೇಕ ಉದಾಹರಣೆಗಳನ್ನು ಪ್ರತೀಕಗಳನ್ನಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ, ನನ್ನ ಪ್ರತಿಕ್ರಿಯೆಯಲ್ಲಿ ಕೆಲವು ಅತಿರೇಕಗಳಿರುವುದಕ್ಕೆ ಸಾಧ್ಯವಿದೆ, ಅದಕ್ಕೆ ನಾನೇ ಹೊಣೆಗಾರ.  read more »

Syndicate content